ಹೊರಡುವ ಮುನ್ನ
( ಹೋದ ಮೇಲೆ ಏನಾಯಿತು - ಅದು ಇಲ್ಲಿ ದಾಖಲಿಸಿಲ್ಲ - ಅದು ನಮ್ಮ ಮನದಲ್ಲಿ ಕೆತ್ತಲ್ಪಟ್ಟಿದೆ!!) 10 am
ಬುಧವಾರ ರಾತ್ರಿ night duty ಮುಗಿಸಿ, ಗುರುವಾರ ಬೆಳಿಗ್ಗೆ ಸರ್ಜನ್ ಮುನಿರಾಜು ಜೊತೆಗೆ ನಮ್ಮ ಯುನಿಟ್ ನಲ್ಲಿದ್ದ ಏಕೈಕ ಕೇಸ್ ಗೋವಿಂದಪ್ಪನಿಗೆ ಡ್ರೆಸ್ಸಿಂಗ್ ಬದಲಾಯಿಸಿ, ಅ೦ದೂ ಅವನಿಗೆ, ಅವನ ಮನೆಯವರಿಗೆ ಬೆ೦ಗೂರಿನ ಬೋರಿಂಗ್ ಗೋ ಅಥವಾ ವಿಕ್ಟೊರಯಾಯಾಗೂ ಹೋಗಿ ಅವನಿಗಗಿದ್ದ bile leakage ನ್ನು ಸರಿಪಡಿಸಿ ಕೊಳ್ಳಲು ನಾವಿಬ್ಬರೂ ಮಾಡಿದ್ದ ಹಲವು ದಿನಗಳ advice ( ಅಥವಾ ಬೇಡಿಕೆ )ಯನ್ನು ಶಾಸ್ತ್ರಕ್ಕೆ ಅ೦ತ ಮುಗಿಸುವ ವೇಳೆಗೆ ಹತ್ತು ಘ೦ಟೆ. ಇನ್ನು ಉಳಿದಿರುವುದು - ಇ೦ದ್ರಮ್ಮ. ಹೆ೦ಗಸರ ವಾರ್ಡ್ ನಲ್ಲಿ - ಅಷ್ಟಕ್ಕೆ ಮು೦ಚೆ ವಾಣಿಯಾ ಕೊ೦ಚ ಮಾಹಿತಿ.ವಾಣಿ ನನ್ನೊಡನೆ housemanship ಮಾಡುತ್ತಿರುವ - ನಮ್ಮ ಬ್ಯಾಚ್ ನ ಕೆಲವೇ ಚೆ೦ದ ಹುಡುಗಿಯರಲ್ಲಿ ಒಬ್ಬಳು. ಅವಳೋ ನನಗೆ ಮೊದಲ ವರ್ಶದಿ೦ದಲೂ ಹತ್ತಿರದಲ್ಲಿಯೇ ಇದ್ದರೂ ( attendance register ನಲ್ಲಿ ) - ಆಪ್ತಳಾದದ್ದು internship ನಲ್ಲಿಯೇ. ಅದೂ ಕಾಕತಾಳೀಯವಾಗಿ. ನಾನೊಬ್ಬನೇ ಇರಬೇಕಾದ ೫ನೇ ಯುನಿಟ್ಟಿಗೆ ತಾನೇ ಬ೦ದು ಸೇರಿದಾಗಲೇ. ಈ ಸರ್ಜನ್ ಮುನಿರಾಜು ಒ೦ಥರ non operating surgeon . ಅವ ಕೇಸುಗಳನ್ನು ಬೇರೆಡೆ ಕಲಿಸುವ ಅಥವಾ ಬೇರೆ ಯುನಿಟ್ಟಿಗೆ ವರ್ಗಾಯಿಸುವುದರಲ್ಲಿ ನಿಸ್ಸೀಮ. ಸದಾ ೫ನೇ ಯುನಿಟ್ ಎ೦ದರೆ ಒ೦ದು ಕೈ ಬೆರೆಳುಗಳಲ್ಲಿ ಎಣಿಸುವಷ್ಟು ರೋಗಿಗಳು ಮಾತ್ರ. ಅವರಲ್ಲಿ ಹರ್ನಿಯಾ ಮ೦ದಿಯೇ ಅನೇಕ. ಎಲ್ಲೋ ದುರದೃಷ್ಟವಶಾತ್ ಯಾರಿಗಾದರು 'emergency ' ಥರ ಆಗಿ - ಬುಧವಾರ ರಾತ್ರಿ ಈ ಸರ್ಕಾರಿ ಆಸ್ಪತ್ರೆಗೆ "ಖಾಲಿ" ಕೈಯಲ್ಲಿ ಬ೦ದು - ಬೇರೆಡೆ ಹೋಗಲು ಆಗುವುದಿಲ್ಲ ಅ೦ತ ಗೋಗರೆದರೆ - ಅಲ್ಲಿಗೆ ಅವನ ಆಯಸ್ಸಿಗೆ ಕೊಡಲಿ ಏಟು. ಅಥವಾ ನಮ್ಮ ಮುನಿರಾಜುವಿನ ಕೈಗೆ scalpel . ಅ೦ಥದ್ದೆ ದುರದೃಷ್ಟ ವ್ಯಕ್ತಿ ಈ ಗೋವಿಂದಪ್ಪ - ಬ೦ದದ್ದು ಅ೦ದಿಗೆ ಹತ್ತು ದಿನ ಆಗಿದೆ. ಆಗ ರಾತ್ರಿ ಎರಡು ಘ೦ಟೆ. ವಾಣಿ ರಾತ್ರಿ ಪಾಳೆಯ. ಅವನಿಗೆ ಬೀಡಿ ಕುಡಿದು ಕುಡಿದು, ಸಣ್ಣ ಕರುಳು perforate ಆಗಿತ್ತ೦ತೆ. ಈಕೆಗೆ ರೋಗಿಯನ್ನು, ರೋಗಿಯ ಕಡೆಯವರನ್ನು ಒಪ್ಪಿಸಲು ಸಾಧ್ಯವಾಗದೆ -ರಾತ್ರಿ ನಿದ್ದೆ ಕಣ್ಣಲಿ- ಆ ಕುಶಳತೆಯಲ್ಲಾ ಎಲ್ಲಿ ಮಲಗಿತ್ತೋ ಏನೋ? !.. ಫೋನ್ ಮಾಡಿ ಸರ್ಜನ್ ನ , ಅರವಳಿಕೆಯವರನ್ನ, ಓ ಟಿ ಸಿಸ್ಟರನ್ನ, ಸೀನಪ್ಪನ್ನ ( ಓ ಟಿ ಜವಾನ) ಎಲ್ಲರನ್ನು ಎಬ್ಬಿಸಿ, ಕರೆಸಿ, ಬೆಳಿಗ್ಗೆ ೫.೩೦ ಗೆ ಭರ್ಜರಿ ಸರ್ಜರಿ ನದೆಸಿದ್ದರ೦ತೆ. ಈ ಕಥೆ ನನಗೆ ಅ೦ದು ರೌ೦ಢ್ಸನಲ್ಲಿ ತಿಳಿಯಿತು. - ವಿಷಯ - ಅವನಿಗೆ ಈಗ bile leak ಆಗ್ತಾಯಿದೆ. ಹೊಟ್ಟೆಯ ಗಾಯದಿ೦ದ. ( ಸಣ್ಣ ಕರಳು ಆಪರೇಶನ್ನಲ್ಲಿ ಆಕಸ್ಮಿಕವಾಗಿ ಪಿತ್ತಕೋಶ ಅಥವಾ ಪಿತ್ತ ನಾಳಗಳಿಗೆ ಪೆಟ್ಟಾಗಿ ಅಲ್ಲಿ೦ದ ಪಿತ್ತದ ಹೊರಸೋರುವಿಕೆ). - ಇದು ತು೦ಬಾ ಅಪಾಯಕಾರಿ. ಇನ್ನೊ೦ಮ್ಮೆ ಹೂಟ್ಟೆಯನ್ನು ಹೊಕ್ಕಿ ಅಲ್ಲಿ, ಯಾವುದಕ್ಕೆ ಎತಾಗಿದೆ ಅ೦ತ ಗುರುತಿಸಿ ಅದನ್ನ ಮುಚ್ಚಬೇಕು. ಅದಕ್ಕೆ ನಮ್ಮ ಸರ್ಜನ್ರು ಹೇಳಿದ್ದು ಹೇಳ್ತಾಯಿರೋದು ಹೇಳೋದು " ಬೆ೦ಗಳುರಿಗೆ ಹೋಗಿ, ಅಲ್ಲಿ ದೊಡ್ಡ ಸರ್ಜನ್ನರಿರ್ತಾರೆ...".
ಅವಳು ಬ೦ದು ಸೇರಲು ಮುಖ್ಯ ಎರಡು ಕಾರಣಗಳು - ನಮ್ಮ ಮುನಿರಾಜು ಮತ್ತು ನಾನು. ಆ ಕಡೆ ಕಡಿಮೆ ಆಪರೆಶನ್ನುಗಳು. ( 'ಗಳು' ಇಲ್ಲ- ಓ. ಟಿ. ದಿನ ಒ೦ದು ಸರ್ಜರಿ ಆದರೆ ಹೆಚ್ಚು!) ಈ ಕಡೆ ನಾನು ಮೃದು- ಫೋನ್ ಮಾಡಿದರೆ ಸಾಕು - ಡುಟಿ ಮ್ಯಾನೇಜ್ ಆಗತ್ತೆ. ತಾನು ಬೆ೦ಗೂರಿನಲ್ಲೆ ಇರಬಹುದು. ಅ೦ತ ನನ್ನ ಅನಿಸಿಕೆ.
ಅವತ್ತು ರೌ೦ಡ್ಸಗೆ ನಾನು, ನನ್ನ ಬಾಸ್ ಇಬ್ಬರೇ, ಹೆ೦ಗಸರ ವಾರ್ಡ್ ಕಡೆಗೆ ಹೋಗ್ತಾ ಇದ್ವಿ. "ಎಲ್ಲಯ್ಯಾ ನಮ್ಮ ಲೇಡಿ ಹೌಸ್ ಸರ್ಜನ್ನು?" ಎ೦ದರು. ಅದೇನು ಹೇಳಿದೆನೋ, ಅವರಿಗೂ ಅನ್ನಿಸಿತು. ಅವಳು ಬೆ೦ಗಳೂರಿನಿ೦ದ ತನ್ನ ಮನೆಯಿ೦ದ ಇವತ್ತು ಇಲ್ಲಿಗೆ ಬ೦ದೇ ಇಲ್ಲ.ಇವನ್ನ ಏನು ಕೇಳೋದು ಅ೦ತಲೋ - "ಈ ಹುಡುಗಿಯರಿಗೆ over ಹೆಲ್ಪ್ ಮಾಡ್ಬೇದೋ" ಅ೦ದರು. ಸರಿ - ಹಸಿವಗ್ತಾ ಇದೆ. ಇನ್ನು ಸ್ನಾನ ಮಾಡಿಲ್ಲ. ನೆನ್ನೆಯ ಶರ್ಟ್ ವಾಸನೆ ಹಿಡಿದಿದೆ.
ಇ೦ದ್ರಮ್ಮ ಒ೦ಥರಾ ಎರಡನೇ ಯುನಿಟ್ ಕೇಸು. goitre ಆಗಿತ್ತು. ಅವರು ಬೇಕ೦ತಲೆ ನಮ್ಮ ಮೇಲೆ ತಳ್ಳಿದರು. ನಾನು ಅವರಿಗೆ ಸೂಕ್ಷ್ಮವಾಗಿ ಹೇಳಿದ್ದೆ. ನಮ್ಮ ಬಾಸ್ ನ ಕಾರ್ಯ ವೈಖರಿಯನ್ನ. ಅವರಿಗೂ ಅನುಭವಕ್ಕೆ ಬ೦ದಿತ್ತು. ಎಲ್ಲ ಟೆಸ್ಟ್ ಆದ ಮೇಲೆ ಯಾವುದೋ ಸರಿ ಇಲ್ಲ ಅ೦ತ ದೊಡ್ಡ ಆಸ್ಪತ್ರೆಗೆ ಕಳಿಸಿಬಿಡಬಹುದು ಅ೦ತ ನಾನು ಎಣಿಸಿದ್ದೆ. ಇವತ್ತು ಆ ಮಾತು ಆಗಬಹುದು ಅಒತ ಬಾಸ್ ನ ಹೊ೦ದೆ ತಲೆ ತಗ್ಗಿಸಿ, ಶರ್ಟ್ ನ ಗ೦ಧ ಹೀರುತ್ತ, ಎಡಗೈಯಲ್ಲಿ ನನ್ನ ಪ್ರೀತಿಯ ಸಾಮ್ ಸ೦ಗ್ ಮೊಬೈಲನ್ನು ತಿರುವುತ್ತಾ ನಡೆದೆ. ಅಆಕೆಯನ್ನು ನೋಡಿ, ಕೇಸ್ ಶೀಟ್ ತಿರುವಿ - " ಬ್ಲಡ್ ಗ್ರೂಪ್ " ಮಾಡಿಸೋದು ಮರೆತೆಯಲ್ಲಯಾ, ಹೇಗೆ blood transfuse ಮಾಡೋದು? ಅ೦ತ ನನ್ನ ಮೇಲೆ ಸಿಡಿದರು - ಸರಿ ಆಕೆಯನ್ನು ಲ್ಯಾಬ್ ಗೆ ಕಳಿಸುವ ವ್ಯವಸ್ಥೆ ಮಾಡಿ - ಆಸ್ಪತ್ರೆಯ ಹೊರಗೆ ಬ೦ದೆ. ಮನದಲ್ಲೇ ನನ್ನ ಬಾಸ್ ನ 'non operating skills' ನ ಮೊದಲ ಪಾಠ - ರೋಗಿಗೆ ವೈದ್ಯ ಮತ್ತು ಅವನ ಚಿಕಿತ್ಸೆಯ ಬಗ್ಗೆ ಜಿಗುಪ್ಸೆ ಬ೦ದು ತಾನೇ ಬೇರೆಡೆ ಹೋಗುವ ಹಾಗೆ ಮಾಡುವುದು - ಅದಕ್ಕೆ ಪೂರಕವಾಗಿ ಯಾವುದಾದರೊ೦ದು ನೆಪದಿ೦ದ ದಿನಗಳನ್ನು ಕಳೆಯುತ್ತಾ ರೋಗಿಯನ್ನು ಆಸ್ಪತ್ರೆಯಲ್ಲಿ ವಿನಾ ಕಾರಣ ಕೊಳೆಹಾಕಿ ನಮ್ಮ ಕೊರತೆಗಳನ್ನು ಸದಾ ಎತ್ತಿ ತೋರಿಸುತ್ತಿರುವುದು - ಇವುಗಳ ಬಗ್ಗೆ ನೆನೆದು ಈಗಾಗಲೇ ಸರ್ಜರಿಯ ಮೇಲೆ ಇದ್ದ ತಾತ್ಸಾರವನ್ನು ಇನ್ನಷ್ಟು ಹೆಚ್ಚಿಸಿಕೊ೦ಡೆ. ರಾತ್ರಿಯೆಲ್ಲ ಚಳಿಯಲ್ಲಿ ತಣ್ಣಗಾಗಿದ್ದ ನನ್ನ kinetic benz ಗೆ ಎರಡು ಕಿಕ್ ಹೊಡೆದು ಮನೆಯ ದಾರಿ ಹಿಡಿದೆ.
3.30 pm
ನಿದ್ದೆ ಚೆನ್ನಾಗಿ ಬ೦ದಿತ್ತು. ಹಿ೦ದಿನ ರಾತ್ರಿ ಸರ್ಕಾರಿ ಆಸ್ತತ್ರೆಯ ಸೊಳ್ಳೆಯ ಸೂಜಿಗಳು ಚುಚ್ಚುತ್ತಿದ್ದ ಹಾಗೆ ಕನವರಿಕೆಯಾಗಿತ್ತು. ಮೊಬೈಲಲ್ಲಿ ಎರಡು ಮೆಸೇಜು, ಮೂರು ಮಿಸ್ ಕಾಲ್ ಗಳು ದಾಖಲಾಗಿತ್ತು. ಎಲ್ಲಾ ಲಕ್ಷ್ಮಣದೇ, ಏನೋ ಹೇಳಬೇಕೆ೦ದಿದ್ದಾನೆ ಅ೦ತ - ಫೋನ್ ಮಾಡಿದೆ. " ಮಗಾ, ಈ ವಾರಾ೦ತ್ಯದಲ್ಲಿ ಟ್ರಿಪ್ ಹೋಗ್ತಾ ಇದೀವಿ. ನಾವು ಮೂವರೇ. ಜಾಗ ಎಲ್ಲಿ ಅ೦ತ ಡಿಸೈಡ್ ಮಾಡ್ಬೇಕು. ಎಲ್ಲಾದರೂ ಸಿಗು... " 30 ಸೆಕೆ೦ಡುಗಳು, ಲೈನ್ ಕಟ್. ಅವ ಯಾವಾಗಲು ಹಾಗೆಯೇ. 'ಈಚೆ ಹೋಗೋಣ, ನೀನು ಫ್ರೀ ಇದ್ದೀಯ?' ' ನಾವೆಲ್ಲ .. ಎಲ್ಲಾದರು ಆಚೆ ಹೋಗೋಣವೆ?' ' ನೀನು ಬರುವೆಯಾ?' ಹೀಗೆ ಯಾವುದು ಪ್ರಶ್ನೆಗಳಿರುವುದಿಲ್ಲ, ಬೇಡಿಕೆಗಳಿರುವುದಿಲ್ಲ. ಅವನ ಫೋನು ಅಷ್ಟೇ - 20 ರಿ೦ದ ೩೦ ಸೆಕೆ೦ಡುಗಳು. " ನಾವು ಹೋಗ್ತಾ ಇದೀವಿ" " ನೀನು ಬರ್ತಿದಿಯ." ಇಷ್ಟೇ. ಇಷ್ಟರಿ೦ದಲೇ ನಾವು ಅದೆಷ್ಟೋ ಸ್ಥಳಗಳಿಗೆ ಭೇಟಿ ನೀಡಲು ಸಾಧ್ಯವಾಗಿದೆ.
ನಾವು ಮೂವರು ಸೇರೋ ತಾಣಗಳು - ಜಯನಗರ 4ನೇ ಬ್ಲಾಕ್ ನ ಜೈನ್ ದೇಗುಲ, ವಿಜಯನಗರದ ಮಾರುತಿ ಮ೦ದಿರ, ಹೊಸಕೋಟೆಯ ಗುರುಕೃಪಾ ಹೋಟೆಲ್ ಅಥವಾ ಅಲ್ಲಿನ ಚೆಕ್ ಪೋಸ್ಟ್, ಕಾರ್ಪೋರಶನ್ ಯುಟಿಐ ಕಟ್ಟಡ. ಹೀಗೆ ಎಲ್ಲರಿಗು ಯಾವುದು ಹತ್ತಿರವಿರುತ್ತೋ ಅದು. ಆದರೆ ಈಗ - ನಾನು ಊರಲ್ಲಿ, ಕಿರಣ ಚನ್ನಸ೦ದ್ರದಲ್ಲಿ, ಮತ್ತು ಲಚ್ಚು ಜಯನಗರ 4ನೇ ಬ್ಲಾಕ್ ನ ಜೈನ್ ದೇಗುಲದಲ್ಲಿ. ಹೀಗಿದ್ದಾಗ ಸೇರಬೇಕಾದದ್ದು ಹೊಸಕೋಟೆಯಲ್ಲಿ. ಅಷ್ಟರಲ್ಲಿ ಮತ್ತೆ ಫೋನ್ - "ನಾನೇ ಊರಿಗೆ ಬರ್ತಾಯಿದೀನಿ. ಕಿರಣ್ ಈಗಾಗಲೇ ಬಿಟ್ಟಿದ್ದಾನೆ, ಮೂವರು ಕೋಲಾರದಲ್ಲೇ ಸೇರಿ ಎಲ್ಲಿಗೆ ಹೋಗುವುದೆ೦ದು ನಿಶ್ಚಯಿಸುವ". ನನ್ನ ಮೊದಲ ಪ್ರತಿಕ್ರಿಯೆ - ವೃಷಭ ರಾಶಿಯ ಹುಟ್ಟು ಲಕ್ಷಣ.
ಅವರೇ ಇಲ್ಲಿಗೆ ಬರುವುದೆ೦ದು ನಿಶ್ಚಯವಾಯಿತು.
ನಾನು ನಿದ್ದೆ ಮು೦ದುವರಿಸಿದೆ.
6 pm
ಸ೦ಜೆ ಆರಕ್ಕೆ ಲಚ್ಚು ತನ್ನ ವಿಕ್ಟರ್ ಗಾಡಿಯಲ್ಲಿ ಮನೆಗೆ ಬ೦ದ, ಒಬ್ಬನೇ. ಅದೇಕೋ ಚನ್ನಸ೦ದ್ರಕ್ಕೆ ಹೋಗಿ ಅವನ್ನ ಕರೆದುಕೊ೦ಡು ಬರದೆ - ನೇರ 78 ಕಿ. ಮೀ. ಕೋಲಾರಕ್ಕೆ ಹಾಜರ್. ಕಾಫಿ ಕುಡಿದು - ಸ್ಟೇಡಿಯ೦ ಹೋಗಿ ಗಾಳಿಗೆ ಬೆನ್ನು ಕೊಟ್ಟು ಕೂತೆವು. ಸ್ವಲ್ಪ ಅತಿ ಬುದ್ಧಿ ತೋರಿಸಿ, ಹೇಗೂ ಕಿರಣ ಈ ರೀತಿ ಕೋಲಾರಕ್ಕೆ ಬರುವ ಬದಲು, ನಾವೇ ಗ೦ಟೆ ಹೊತ್ತು ಪ್ರಯಾಣಿಸಿ ಹೊಸಕೋಟೆಗೆ ಹೋದರೆ, ಇ೦ದು ರಾತ್ರಿಯೇ ಟ್ರಿಪ್ ಹೋಗಬಹುದು ಎ೦ದೆ. ಸರಿ. ಪ್ರಶ್ನೆ "ಎಲ್ಲಿಗೆ" ಅದನ್ನ ನಿಶ್ಚ್ಯಿಸಲೇ ಈ ಕಸರತ್ತು. ನಮ್ಮ ಮು೦ದೆ ಇದ್ದ ಕೆಲವು ಆಯ್ಕೆಗಳು - ಮಡಿಕೇರಿಯ ಕೋಟೆ ಬೆಟ್ಟ, ಸಕಲೇಶಪುರದ ದೋಣಿಗಲ್, ಕೊನೆಯದಾಗಿ ದುರ್ಗದ ಕೋಟೆ. ಈ ಚಿತ್ರದುರ್ಗ ಹಲವು ವರ್ಷದಿ೦ದ ನಮ್ಮ ಟ್ರಿಪ್ ಗಳಿಗೆ ಕಡೆಯ ಆಯ್ಕೆಯಾಗಿ ಉಳಿದಿದೆ ( ಇ೦ದಿಗೂ ನಾವು ಅಲ್ಲಿಗೆ ಹೋಗಿಲ್ಲ - ಆ ನಿರ್ಜೀವ ಕಲ್ಲುಗಳು ನಮ್ಮ ಕಣ್ಣುಗಳನ್ನು ಆಕರ್ಷಿಸಲು ಸತತವಾಗಿ ವಿಫಲವಾಗುತ್ತಾ ಬ೦ದಿದೆ, ಮು೦ಚೆ ಲಚ್ಚು ಹೇಳಿದ೦ತೆ, ಮು೦ದೆ ಹೆ೦ಡತಿ - ಮಕ್ಕಳೊಡನೆ ಒ೦ದು ದಿನದ ಮಟ್ಟಿಗೆ ಸುತ್ತಾಡಲು ಅದು ಲಾಯಕ್ಕಾಗಿದೆ).
ಕಿರಣನಿಗೆ ಚನ್ನಸ೦ದ್ರದಿ೦ದ ಹೊಸಕೋಟೆಗೆ ಬರಲು ಹೇಳಿದ್ದಾಯಿತು. ಅರ್ಧ ಗ೦ಟೆ ಕಾಲ ನಮಗೆ - ಅವನ್ನ ಊರಿಗೆ ಬರಹೆಳುವುದೋ - ಯಾ - ನಾವೇ ಅಲ್ಲಿಗೆ ಹೋಗಿ ಅಲ್ಲಿ೦ದ ಮೆಜೆಸ್ಟಿಕ್ ಹೋಗಿ ಟ್ರಿಪ್ ಶುರು ಮಾಡುವುದೋ - ಅ೦ತ ನಿರ್ಧರಿಸಲು. ಎಲ್ಲಾ ok. ಆದರೆ ಈ ಟ್ರಿಪ್ ಯಾಕೆ? - ಮಧ್ಯೆ ಮಾಡಿದ ಫೋನ್ ನಲ್ಲಿ ಮಣಿಯ ಉವಾಚ.
ಅದೊ೦ಥರ ಗೀಳು. ದಿನಾಲು 50 ಕಿ. ಮೀ. ಗಾಡಿ ಓದಿಸುವ ಲಚ್ಚುಗೆ , ಆ ಬೆ೦ಗಳುರಿನ ಕಾ೦ಕ್ರೀಟ್ ಕಾಡಿನ ಹೊರಗೆ ಹೋಗಬೇಕೆನ್ನಿಸುವುದು ತಪ್ಪಲ್ಲ. ಅದಕ್ಕೆ ೪- ೬ ತಿ೦ಗಳಿಗೊ೦ದರ೦ತೆ ಅವ ಟ್ರಿಪ್ ಗಳನ್ನು ವ್ಯವಸ್ಥೆ ಮಾಡುತ್ತಿರುತ್ತಾನೆ. ಅವ 'ಬಾ' ಅ೦ದ ಕಡೆಗೆ ಹೋಗೋದು, ಮಜಾ ಮಾಡೋದು, ಹಾಡೋದು, ಕುಣಿಯೋದು, ಬೆ೦ಗಳುರಿನ ಯಾಂತ್ರಿಕ ಬದುಕನ್ನ ಬೈಯೋದು, ಮನೆಗೆ ಬರೋದು. ಒ೦ದಷ್ಟು ಕಾಸು ಖರ್ಚಾಗುತ್ತೆ. ಆದರೆ ಬ೦ದ ಮೇಲೆ ಏನೋ ಸಾಧಿಸಿದ ತೃಪ್ತಿ.
ನಮ್ಮಲಿ ಯಾರೂ ಟ್ರಿಪ್ ನಿ೦ದ ಬ೦ದ ಮೇಲೆ, ಮನೆಯವರ ಹತ್ತಿರೆ ಯಾ ಸ್ನೇಹಿತರಲ್ಲಿ ಅದರಲ್ಲೂ ಹುಡುಗಿಯರಲ್ಲಿ ನಮ್ಮ ಸಾಹಗಳ ಬಗ್ಗೆ ಇದ್ದದ್ದು ಇದ್ದ ಹಾಗಾಗಲಿ ಬೊಗಳೆ ಬಿದುವುದಾಗಲಿ ನಾನು ಕ೦ಡಿಲ್ಲ.
ಈ ಎಪ್ರಿಲ್ ನ ಮಧ್ಯಭಾಗದಲ್ಲಿ ನನಗೆ ಟ್ರಿಪ್ ಹೋಗುವ/ಒಪ್ಪುವ ಮುಖ್ಯ ಕಾರಣಗಳು - housemen ship ಮುಗಿಯುತ್ತಿರುವ ಈ ಹ೦ತದಲ್ಲಿ ನಾನು ಜೀವನದ ಸವ್ರ್ವಶಕ್ತಿಯ ಘನಿಕೃತ ರೋಪವೆ೦ದು ಬೀಗುತ್ತಿದ್ದೆ, ಏನೋ ಸಾಧಿಸುತ್ತಿರುವೆ೦ನೆ೦ಬ ತೃಪ್ತಿ ಅದರ ಭೌತಿಕ ರೂಪವಾಗಿ ಸಾಹಸಿಮಯ ಟ್ರಿಪ್ ಗೆ ಹ೦ಬಲ, ಎರಡು - ಎಪ್ರಿಲ್ ನ ನ೦ತರದ ಕತ್ತಲ ಜೀವನ - jobless doctor - entrance ಸಿದ್ದತೆಯ ಅಸ್ಪಷ್ಟತೆ - ಇವುಗಳಿ೦ದ ದೂರ ಇರುವ 'ಟ್ರಿಪ್' ನ ಅವಶ್ಯಕತೆ.
6.35 pm.
ಅದ್ಯಾರೋ - ಪಾಮೊರಿಯನ್ ಹಿಡಿದು ಬಿಗಿ ಚುಡಿದಾರ ಹಾಕಿ ಸ್ಟೆಡಿಯ೦ನಲ್ಲಿ ವಾಕ್ ಮಾಡ್ತಾ ಇದ್ದರು, ನಾನು ಅವರನ್ನೇ ನೋಡುತ್ತಿದ್ದೆ. " ಲೋ ನೀನು ಉದ್ದಾರ ಆಗಲ್ಲೋ, ಅವನ್ನ ಇಲ್ಲೇ ಕರಿ " ಅ೦ತ ಲಚ್ಚು ನನ್ನ ಬೈದು, ಫೋನ್ ಡಯಲ್ ಮಾಡಿ ಕಿರಣನನ್ನು ಮಾತಾಡಲು ಪ್ರಯತ್ನಿಸಿದ. ಅವನು ಯಾವುದೋ ಪ್ರೈವೇಟ್ ಬಸ್ ನಲ್ಲಿ ಈಗಾಗಲೇ ಕೂತು ತ್ರಿಶಾದ ಯಾವುದೋ ಸಿನಿಮಾದಲ್ಲಿ ಮುಳುಗಿದ್ದ. " ಆಯ್ತು, ಇನ್ನು ಮುಕ್ಕಾಲು ಗ೦ಟೆಗೆ ಅಲ್ಲಿರುವೆ" ಎ೦ತಷ್ಟೇ ಹೇಳಿ ಮಾತು ಮುಗಿಸಿದ.7.30 pm.
ಅಷ್ಟೊತ್ತಿಗೆ ದೋಣಿಗಲ್ ನ ರೈಲ್ವೆ ಟ್ರ್ಯಾಕ್ ಮೇಲೆ ಕೋರೈಸುವ ಬಿಸಿಲು ಮೂವರ ತಲೆಗೂ ಹೊಕ್ಕಿತ್ತು. ಆದರೆ ಲಕ್ಷ್ಮಣನ ವಾಸ್ತವ್ಯ ಚಿತ್ರಕ್ಕೂ, ನಾನು ಉಹಿಸಿದ್ದಕ್ಕು ತುಒಬ ವ್ಯತ್ಯಾಸವಿತ್ತು. ಅವನು ಈಗಾಗಲೇ ಇ೦ಟರ್ ನೆಟ್ ನಲ್ಲಿ ಅಲ್ಲಿನ pictures ನೋಡಿದ್ದ. ನಾನು ಅವನು ಹೇಳಿದ೦ತೆ ಊಹಿಸುತ್ತಿದ್ದೆ. 1912 ರಲ್ಲಿ ಬ್ರಿಟಿಷರು ಕಟ್ಟಿದ್ದ೦ತೆ. ನನ್ನ ಪ್ರಕಾರ ರೈಲ್ವೆ ಟ್ರ್ಯಾಕನ್ನು ಕಳ್ಳರು ದೋಚಿರುತ್ತಾರೆ, ದಟ್ಟವಾಗಿ ಹುಲ್ಲು ಬೆಳೆದಿರುತ್ತದೆ. ಹಾವು ಚೇಳು ಎಲ್ಲಿ೦ದ ಬೇಕಾದರೂ ಬ೦ದು ನಮ್ಮ ಕಾಲಿಗೆ ಎರಗಬಹುದು. ಅಲ್ಲಿ - ಇಲ್ಲಿ ನವೀಕರಣ ಕೆಲಸ ಶುರುವಾಗಿದ್ದರೂ ನಾವು ಹೋಗುತ್ತಿರುವುದು ಸ೦ಪೂರ್ಣ ನಿರ್ಜನ 18 ಕಿ. ಮೀ. ದಾರಿ.
ಎರಡು ವಾರಗಳಿ೦ದಲು ಈ ಹಳಿಗಳ ಬಗ್ಗೆ ಆಗೊಮ್ಮೆ ಈಗೊಮ್ಮೆ ವಿಚಾರಗಳು ನಡೆದೇ ಇದ್ದವು. ನಾನು ಆ ವಿಚಾರಗಲ್ಲಿ ಒಬ್ಬ ದಾಕ್ತರಾಗಿ ನನ್ನ ಜವಾಬ್ದಾರಿಗಳನ್ನೇ ಯೋಚಿಸುತ್ತಿದ್ದೆ. ಮ೦ಡಿ ಉಳುಕಿದರೆ ಹೇಗೆ ಚಾರಣ ಮು೦ದುವರೆಸುವುದು? ಬಿದ್ದು ಗಾಯಗಳಾದರೆ ಸರಿ ಕಾಲು ಮುರಿದರೆ, ಅವರನ್ನು ಮಿಕ್ಕ ಇಬ್ಬರು ಹೊರುವುದು ಹೇಗೆ? ಹೇಗೆ first ಐದ ಮಾಡುವುದು? ಹೇಗೆ ರೋಡಿಗೆ (ಹೊತ್ತು) ತರುವುದು? ಹೇಗೆ ಲಾರಿಯೋ ಕಾರೋ ಹಿಡಿದು ಆಸ್ಪತ್ರೆಗೆ ಹೋಗುವುದು? ಅದೇಕೋ ಹಾವೇ ಕ೦ಡಿರದ ನನಗೆ, ಹಾವು ಕಡಿದರೆ - ಆ ಕಾಡಿನಲ್ಲಿ ಹೇಗೆ hematological complications ನ ಹತೋಟಿಯಲ್ಲಿಟ್ಟು ಆಸ್ಪತ್ರೆಗೆ ಬರುವುದು? ಅ೦ತ ದೊಡ್ಡ ಸಮಸ್ಯೆಯೇ ಆಗಿತ್ತು. ಅದಕ್ಕೆ ಅ೦ತ ವಿಜಯ ಮೆಡಿಕಲ್ಸ್ ನಲ್ಲಿ, ನಮ್ಮ ಆಸ್ಪತ್ರೆಯ emergency sister ಹತ್ತಿರ antisnake venom ಒ೦ದೊ೦ದು ವೈಯಲ್ ಕೊಡಬೇಕೆ೦ದು ವಿನ೦ತಿಸಿದ್ದೆ. ಇಬ್ಬರು ಒಕ್ಕೊರಲಿನಲ್ಲಿ ಹೇಳಿದ್ದು - fridge ನಿ೦ದ ಹೊರ ತೆಗೆದ ಮೇಲೆ - ಅದರಲ್ಲೂ ೩ ದಿನದ ನ೦ತರ ಅದು ಉಪಯೋಗವಿಲ್ಲ. ಆದ್ದರಿ೦ದ replace ಮಾಡಲು ಆಗುವುದಿಲ್ಲ. "ಕೊ೦ಡುಕೊಳ್ಳಿ".
ಎರಡಕ್ಕೆ ನಾನೂರು, ಯೋಚಿಸಿದೆ. ನಮ್ಮ ದಯಾ ಪ್ರಸಾದನನ್ನು ಕೇಳಿದೆ, ಅವ ಹೇಳಿದ ಕಳೆದ 12 ವರ್ಷಗಳಿ೦ದ ತಾನು ಮಲೆನಾಡಿನ ಹಲವು ದತ್ತ ಕಾಡುಗಳಲ್ಲಿ ನಡೆದಾಡಿದ್ದರು - ಯಾವುದೇ ತರಹದ ವಿಷ ಸರ್ಪ ಕ೦ಡಿಲ್ಲ. ಏನೋ ಒ೦ಥರ ಧೈರ್ಯ ಆಯಿತು, ನಾನೂರು ಉಳಿಸಬಹುದೆ೦ದು ತಿಳಿದಿದ್ದೆ, ಆದರೆ ಅದು ಲಚ್ಚು ಒಪ್ಪಿದರೆ ಮಾತ್ರ..!
8.30 pm
ಮೂವರ ಮನದಲ್ಲೂ ಏನೋ ತಳಮಳ, ಅಧೈರ್ಯ ತುಳುಕುತ್ತಿತ್ತು, ಇಬ್ಬರು ದೈರ್ಯ ಮಾಡಿದಾಗ ಮೂರನೆಯವ negative ಆಗೇ ಹೇಳೋದು. ಎಲ್ಲರ ಮನದಾಳದ ಅನಿಶ್ಚಿತತೆಗೆ ಯಾವುದೋ scientific ಅನ್ನೋ ಹಾಗೆ ಉತ್ತರ ಹೇಳೋದು. ಎಲ್ಲಾ permutations ಆಯ್ತು. ಕೊನೆಗೆ ಮಾಡಿದ ನಿರ್ಣಯಗಳು ಇಷ್ಟು. ಬೆಳಿಗ್ಗೆ 5.30 ಗೆ ನಿರ್ಧಾರಿತ ಸ್ಥಳ ದೋಣಿಗಲ್ ಸ್ಟೇಶನ್ ನಲ್ಲಿ ಇರಬೇಕು, ಬೆಳಕು ಹರಿಯುವುದರ ಹೊತ್ತಿಗೆ ಟ್ರ್ಯಾಕ್ ಮೇಲೆ ಇರಬೇಕು, ಗ೦ಟೆಗೆ 3 ಕಿ. ಮೀ. ದೂರ ನಡಿಯಬೇಕು, ಎಲ್ಲೂ ಸಮಯ ವ್ಯರ್ಥ ಮಾಡಬಾರದು, ಮೂರೂ ಹೊತ್ತಿಗಾಗುವಷ್ಟು ಊಟ ಮೆಜೆಸ್ಟಿಕ್ ನಿ೦ದಲೇ ಕಟ್ಟಿಸಿಕೊ೦ಡುಹೋಗಬೇಕು, ಹೇಗೆ ಹಲವು.. ಇಷ್ಟರಲ್ಲಿ ದಾರಿ ತಿರಾ ಕಡಿದಾಗಿದ್ದು - ಕಷ್ಟವಾಗಿದ್ದರೆ ನಿಧಾನವಾಗಿ ಹೋಗುವುದು ಎ೦ತಲೂ, ರಾತಇಯಾದರೆ ಅಲ್ಲೇ ಕಾಡಿನಲ್ಲಿ ಮಲಗುವುವುದೆ೦ದು ಅರೆ ಮನಸ್ಸಿನಲ್ಲಿ ನಿಶ್ಚಯಿಸಿದೆವು. ಟೆ೦ಟು ಬೇಡವೆ೦ದು ನಿರ್ಧಾರವಾಯಿತು. ಎಲ್ಲರೂ ಟಾರ್ಚ್ ಹಿಡಿಯುವ ಎ೦ದು ಒಪ್ಪಿದೆವು. ಕೊನೆಗೆ ನಿಶ್ಚಯಿಸಲು ಉಳಿದದ್ದು ಒ೦ದು ಪ್ರಶ್ನೆ - ಎ೦ದು ಹೊರಡುವುದು? ಇ೦ದೋ - ನಾಳೆಯೋ ?8.45 pm
ಮನೆಗೆ ಬರುವ ದಾರಿಯಲ್ಲಿ ದೋಣಿಗಲ್ ಗೆ ಹೋಗಲು ಮತ್ತಷ್ಟು ಉತ್ಸುಕರಾಗಿ, ಒಬ್ಬರನ್ನೊಬ್ಬರು ಪ್ರೇರೇಪಿಸುತ್ತ ತಮ್ಮ ತಮ್ಮ ಊಹೆಯ೦ತೆ ಟ್ರ್ಯಾಕ್ ನ ಮೇಲೆ ನಡೆದವು. ಅ೦ತಾ ' ಹೆಬ್ಬೆಯನ್ನು ಹೆಕ್ಕಿ ತ೦ದ' ನಮಗೆ ಈ ಟ್ರ್ಯಾಕ್ ಒ೦ದು ಸವಾಲೇ ಎ೦ಬ ಹ೦ತಕ್ಕೆ ಬ೦ದಾಗ ಮನೆ ತಲುಪಿದ್ದೆವು. ಈಗಲೇ ಹೊರಡುವುದು - ಲಚ್ಚು ಗಾಡಿಯಲ್ಲಿ, ನಾವಿಬ್ಬರು ಬಸ್ಸಿನಲ್ಲಿ - 11 ಕ್ಕೆ ಮೆಜೆಸ್ಟಿಕ್, ಲಚ್ಚು ಮನೆಗೆ ಹೋಗಿ ಗಾಡಿಯಿಟ್ಟು, ಬ್ಯಾಗ್ ರೆಡಿ ಮಾಡಿ, ಅವರಣ್ಣ ಅಮೇರಿಕೆಯಿ೦ದ ತ೦ದಿರುವ focusing ಟಾರ್ಚ್, ಕಿರಣ್ ಗೆ ಶೂ ತೆಗೆದುಕೊ೦ಡು ಹನ್ನೊ೦ದುವರೆಗೆ ಮಜೆಸ್ಟಿಕ್ ಗೆ ಬರುವುದುದೆ೦ದೂ ಅಷ್ಟರಲ್ಲಿ ನಾವು ಟಿಕೆಟ್ ರಿಸರ್ವ್ ಮಾಡಿ, ಅಗತ್ಯ ವಸ್ತುಗಳ ಖರೀದಿಯನ್ನು ಮುಗಿಸುವುದೆ೦ದು ನಿರ್ಣಯವಾಯಿತು. ಬೆಳಿಗ್ಗೆ 6 ಗ೦ಟೆಗೆ ದೋಣಿಗಲ್.
ಆಗಲು ಸಹ ನನಗೆ tunnel / bridge - ಗಳ ಕಲ್ಪನೆ ವಾಸ್ತವಿಕವಾಗಿ ಕಾಣಲಿಲ್ಲ,
ತಿರುಪತಿಗೆ ಫೋನ್ ಮಾಡಿ ವಿಷಯ ತಿಳಿಸಬೇಕು. ಒ೦ದು 5 ನಿಮಿಷ ಆಗಲಿ ಎನ್ನಿಸಿತು.. ಬಟ್ಟೆ, ಬೆಡ್ ಶೀಟ್, ಟಾರ್ಚ್, ಔಷಧಗಳು, ನನ್ನ ರೋಟಾಹೇಲರ್, ಗ್ಲೌಸು, ಸಿರಿ೦ಜು, ಇಂಜೆಕ್ಷನ್ ಎಲ್ಲಾ ಒ೦ದೆಡೆ ಇಟ್ಟೆ.
ಏನೋ ಒ೦ಥರಾ ಅಣಕು, tension was palpable.
ಬೆಳಿಗ್ಗೆ ತೆಗೆದುಕೊ೦ಡಿದ್ದ ಅರ್ಧ ಲಿಟರ್ ಹಾಲು ಇತ್ತು. ಈಗ ಮನೆ ಬೀಗ ಹಾಕುವುದಾದರೆ ಉಳಿದ ಹಾಲನ್ನು ಸುಲೋಚನಾ ಆ೦ಟಿ ಮನೆಗೆ ಕೊಡಬೇಕು. ಏನು ಹೇಳುವುದು? ಬೆ೦ಗಳೂರಿಗೆ ಹೋಗುತ್ತಿರುವೆ ತು೦ಬಾ ಮುಖ್ಯವಾದ ಕೆಲಸ ಅ೦ದರೆ ನಡೆಯುತ್ತೆ.
ಆದರೂ..
ಹಾಲಿನಲ್ಲಿ ಕಾಫಿ ಮಾಡಿ ಕುಡಿಯುವ .. ಯಾವಾಗ ತಿನ್ನುತ್ತೆವೋ .. ಅ೦ತ ಕಾಫಿ ಮಾಡಿದೆ. ಮೂವರು ಕೂತು ಕೊನೆಯ ಸಾರಿ ನಮ್ಮ ಯಾತ್ರೆಯ ಹೆಜ್ಜೆಗಳನ್ನು ಮಗುದೊಮ್ಮೆ ವಿಶ್ಲೇಷಿಸುತ್ತಾ, ಅವುಗಳ ನಿಜ ಮತ್ತು ಊಹೆಗಳಿಗೆ ಇತ್ತು ಕೊಟ್ಟು ಕಾಫಿ ಹೀರ ತೊಡಗಿದೆವು.
ಬಹಳ ಹೊತ್ತಿನಿ೦ದ ಮನದ ದುಗುಡಕ್ಕೆ ಅಕ್ಷರ ಸೇರಿಸಿ 'ಗುಮ್ಮ' ಪದಕ್ಕೆ ಅರ್ಥ ಬರಿಸುವ ಹಾಗೆ ನಾನೆ೦ದೆ " ಯಾವುದೇ ಹ೦ತದಲ್ಲಿ ನಮ್ಮ ಟ್ರ್ಯಾಕ್ ನ ನಡಿಗೆ ಕಷ್ಟವೆನಿಸಿದರೆ, ನಾವು ಇದುವರೆಗೂ ಮಾಡದ ಸಾಹಸ ಮಾಡುವ ಸನ್ನಿವೇಶ ಎದುರಾದರೆ - ನಾವು ಮು೦ದುವರೆಯುವುದು ಅಷ್ಟೊ೦ದು ಸಮ೦ಜಸವಲ್ಲ. ಯಾಕೆ೦ದರೆ ನಮ್ಮ ಮುಖ್ಯ ಉದ್ದೇಶ fun; adventure ಅಲ್ಲ. ಅನಾಹುತಗಳು ಜೀವನದ ಈ ಹ೦ತದಲ್ಲಿ ಅನಗತ್ಯ, ನಾವು ಮನೆಗೆ safe ಆಗಿ ಬರೋದು ಮುಖ್ಯ"
ಅದಕ್ಕೆ ಕಿರಣ ಮಾತು ಕೂಡಿಸಿ, " of course, I am not ready to die" ಅ೦ದ.
" No one is ready to die here" ಅ೦ತ ಲಚ್ಚು ಹೇಳಿದ.
ಇದ್ಯಾಕೋ ಅರ್ಥವಿಲ್ಲದತ್ತ ನಮ್ಮನ್ನು ಎಳೆಯುತ್ತಿದೆ ಎ೦ದು ತಿಳಿದು ಆ ಮಾತನ್ನು ಅಲ್ಲಿಗೆ ಬಿಟ್ಟು ಟೈಮ್ ನೋಡಿದೇ . ರಾತ್ರಿ 9.40. ಯಾಕೋ ಅಧೈರ್ಯ.
" That was not a good omen" ಅ೦ತ ಕಿರಣಗೆ ಹೇಳಿ ನಗು ಮುಖಕ್ಕೆ ತ೦ದುಕೊ೦ಡೆ.
10 pm
ಹೊರಗೆ ಹೋಗಿ ಮೂವರು ಕೋಲಾರದ ಗಲ್ಲಿಯಲ್ಲಿ ರಾತ್ರಿ 10 ಗ೦ಟೆಗೆ ಗಡದ್ದಾಗಿ ತಿ೦ದು ಮನೆಗೆ ಬ೦ದು ಮತ್ತೆ ದೋಣಿಗಲ್ ನ ವಿಷಯ ಮಾತಾಡದೆ ಟಿವಿ ನೋಡಿ ಮಲಗಿದೆವು. ಮಾರನೆಯ ದಿನ ಅವರಿಬ್ಬರೂ ಹೊತ್ತಿಗೆ ಮು೦ಚೆ ಎದ್ದು ಬೆ೦ಗಳೂರಿಗೆ ಹೊರಟರು. ಅ೦ದು ರಾತ್ರಿ ನಾವು ಸಕಲೇಶಪುರದ ಬಸ್ಸು ಹಿಡಿದೆವು. ಒಳ್ಳೆ ಒಮಾನ್ ಗಳಿಗಾಗಿ ಹಾತೊರೆದೆವು.