ಮೂಡಬಿದರೆಯ ಜನ ನಿಬಿಡ ರಸ್ತೆಗಳನ್ನು ದಾಟಿ ಊರ ಹೊರಗೆ ಹೋಗುವ ದಾರಿಯಲ್ಲಿ ಶ್ರೀ ದಿಗಂಬರ ಮಹಿಳಾ ಹಾಸ್ಟೆಲ್, ಶ್ರೀ ಜೈನ ಮಠ, ಪುರಾತನ ಕೊಳ, ರಸ್ತೆಯ ಇಕ್ಕೆಲಗಳಲ್ಲಿಯ ಜೈನ ಸಮಾಧಿಗಳು ಮತ್ತು ಇದರ ಮು೦ದೆ ಇರುವ ಕೋಟೆಬಾಗಿಲು ಗ್ರಾಮ ಎಲ್ಲ ಕಳೆದ ಬಳಿಕ ನಿರ್ಜನ ಕಾಡು ಪ್ರಾರಂಭ. ಅಲ್ಲಿಂದ ಕೇವಲ ೧೦ ಕಿ. ಮೀ. ದೂರದಲ್ಲಿದೆ ಶಿರ್ತಾಡಿ. ಅದಕ್ಕೂ ಮೊದಲು ದೊರೆಯುವುದೇ ಪಡು ಕೊಣಾಜೆ ಗ್ರಾಮ. ಅಲ್ಲಿ೦ದ ಕಾಲು ನಡಿಗೆಯಲ್ಲಿ ಎಡಕ್ಕೆ ಕ್ರಮಿಸಿದರೆ ಮು೦ದೆ ಕಾಣಸಿಗುವುದೇ ಬ್ರುಹದಾಕಾರದ ಜೋಡು ಕಲ್ಲುಗಳು. ಕೊಣಾಜೆ ಕಲ್ಲು. ಸುಮಾರು ೨೦೦ ಅಡಿಗಳ ಎತ್ತರದಲ್ಲಿ ಸು೦ದರ ಕಾಡಿನ ನಡುವೆ ಸಾಗುವ ದಾರಿಯಲ್ಲಿ ಮೇಲೆ ಹತ್ತಿದರೆ ಸುತ್ತ ಪದರ ಪದರವಾಗಿ ಹಬ್ಬಿರುವ ಗಿರಿ ಶ್ರೇಣಿಗಳ ವಿಹ೦ಗಮ ದೃಶ್ಯ.
ಅಲ್ಲಿ೦ದ ಹಾಗೆ ಮೇಲಕ್ಕೆ ಏರಿತ್ತಾ ಹೋದರೆ ಕಾಡು ದಾರಿ ಕೆಲವು ತೆ೦ಗಿನ ಮರಗಳ ಸಮೀಪ ಸಾಗಿ ಕೊ೦ಚ ಕೆಳಗೆ ಹೋದ೦ತಾಗಿ ನಮ್ಮನ್ನು ಶ್ರೀ ಶಾರದಾ ದಾಸರ ಸಿದ್ದಾಶ್ರಮಕ್ಕೆ ಕೊ೦ಡೊಯುತ್ತದೆ. ಪ್ರಶಾಂತ ಅರಣ್ಯದ ನಡುವೆ ಶ್ರೀ ಶಾರದಾ ದಾಸರ ಆಶ್ರಮ ಕೊನಜೆ ಕಲ್ಲಿನ ಪಾದದ ಅಡಿಯ ಗುಹೆ. ಅಲ್ಲಿ ಬಹು ಅವಶ್ಯಕ ಕುಡಿಯವ ನೀರು ಲಭ್ಯ. ಅಲ್ಲಿ೦ದ ಮು೦ದೆ, ಕೊಣಾಜೆ ನೆತ್ತಿಯ ದಾರಿ.
ಇಲ್ಲಿನ ಸೂರ್ಯಾಸ್ತದ ದೃಶ್ಯ ಮರೆಯಲಸಾಧ್ಯದ ಸ೦ಗತಿ.
ಮಾರ್ಗ - ಮ೦ಗಳೂರಿನಿ೦ದ ಮೂಡಬಿದರೆ
ಮೂಡಬಿದರೆಯಿ೦ದ ಶೆರ್ತಾಡಿ ದಾರಿಯಲ್ಲಿ ೬ ಕಿ. ಮಿ. ದೂರದಲ್ಲಿ ಎಡಕ್ಕೆ ಪಡುಕೊನಾಜೆ ಗ್ರಾಮ ಬಸ್ಸು ಲಭ್ಯವಿದೆ. ಅಲ್ಲಿ೦ದ ಕಾಲು ನಡಿಗೆ.
ಅಗತ್ಯ ವಸ್ತುಗಳು - ನೀರು, ತಿನಿಸು.
ಮಳೆಗಾಲದ ಮೊದಲ ಹಾಗು ಕಡೆಯ ದಿನಗಳು ಭೇಟಿ ನೀಡಲು ಸೂಕ್ತ ಸಮಯ.