Tuesday, July 10, 2012

ನನ್ನ ನೋಡು...

ಮಾತಿನ ಲಹರಿ ಹಾಡಿನ ಹಾಗೆ. ಅಲ್ಲಲ್ಲಿ ಒಂದೊಂದು ಶಬ್ದದ ಅರಿವು. 


ಅವ ... ಕುಉಪಿತ್ತು ... .. . . . . ವಂದಾರ್.. . .
ಅಪ್ಪು ನೀ  . . . .. ....   . . . . . .              ... .... ..ತಿಟ್ಟು . . .
.. . . ...... ......................               . . . .     .ವನ್ಹಗಿತ್ತು . . 



ಅದೇ ತಲೆ ಬುಡ ಅರ್ಥವಿಲ್ಲದ ಬೆಟ್ಟದ ಭಾಷೆ, ಮಲಯಾಳ, ಆಟೋ ಒಂದೇ ಸಮನೆ ಶಬ್ದ ಮಾಡಿ ಪ್ರತಿ ತಿರುವಿನಲ್ಲೂ ನಿಂತು ನಿಂತು ಕಕ್ಕಯಂ ಅಣೆಕಟ್ಟಿನಿಂದ ಕೆಳಗೆ ಇಳಿಯುತ್ತಿದೆ. ಪಕ್ಕದಲ್ಲಿ ಕೂತಿದ್ದ ಅರೆ ಮುದುಕ, ಯಾವುದೋ ಮಹತ್ ಕಾರ್ಯಕ್ಕೆ ಗಾನದ 


viral fever ಬಂದಾಗಿನ ಕಣ್ಣಿನ ಹಾಗೆ ಕೆಂಪಾಗಿದ್ದ ಕಣ್ಣು, ಅಷ್ಟೇ ಕೆಂಪಾಗಿದ್ದ ತುಟಿ, ಯಾವುದೋ ಹಳೆಯ facial palsy ಗೆ ತುತ್ತಾಗಿದ್ದ ಬಲಗಡೆಯ ಮುಖದ ಸ್ನಾಯುಗಳು ಆದಷ್ಟು ಚೇತರಿಸಿಕೊಂಡಿದ್ದರು, ಹಾಕಿದ್ದ ಪಾನ್ ಆಗಾಗ ಮೂತಿಯ ಒಂದು ಕೊನೆಯಿಂದ ತೊಟ್ಟಿಕ್ಕುತ್ತಿತ್ತು. 


ಅಗಲವಾದ ಮೇಲ್ದುಟಿ. ದಪ್ಪ ಗಲ್ಲ.  ಆಗಾಗ ತನ್ನ ಕೆಂಪು "ಮುಂಡು"ವಿನ ಕೊನೆಯಿಂದ ಸೋರುತ್ತಿದ್ದ ಎಂಜಲನ್ನು ವರೆಸುತ್ತ ಪ್ರವರ ಮುಂದುವರೆದಿತ್ತು. ಮುಂಗಾರಿನ ಮುಂಚಿನ ಬಯಲಲ್ಲಿ ಬೆಳೆದ ಹುಲ್ಲಿನ ಹಾಗೆ ಇದ್ದ ಕೂದಲನ್ನು ಸವರುತ್ತ,  ದಪ್ಪ ನಾಲಗೆಯಲ್ಲಿ ಮೆಲ್ದುಟಿಯನ್ನು ವರೆಸುತ್ತ ಆಟೋ ಇಳಿದ. 


"ಅಂಗ ಏನ್ ಪಾಕ್ಕಿರೆ ಸ್ವಾಮೀ, . . . 
. . . . . . ನೀನ್ ಎನ್ನ ಪಾಕ್ಕು . . . 
. . . 
ನನ್ನ ನೋಡು. . 
. . . . .  ಇಲ್ಲಿ ಚೂಡು . . 
ಏನನ್ನ ನೋಡು. ."


". . . ಶ್. . ಶ್. . ಹಕ್ಕಿ ಹಾರಿ ಹೋಗುತ್ತೆ. ಗಲಾಟೆ ಮಾಡಬೇಡ. . ."


ಹೆಜ್ಜೆಯ ಮೇಲೊಂದು  ಇಕ್ಕುತ. . ಶಿವ ತಾಂಡವ ಮಾಡಲೆತ್ನಿಸುತ. . ತನ್ನ center of gravity ಯ ತಾನೇ ಹುಡುಕುತ. . ಮೆದುಳಿನ wernicke's ಜಾಗದಲ್ಲಿ "ನೋಡು" - see ಎಂಬುದಕ್ಕೆ ಎಲ್ಲ ಭಾಷೆಗಳ  ಪದಗಳು ಪೈಪೋಟಿ ನಡೆಸಿ ಯಾವುದೂ ಅರ್ಥ ತುಂಬಿ ಹೊರ ಬರದೆ, ತನ್ನ ನಾಲಗೆಯ ನರಗಳನ್ನು ಶಪಿಸುತ್ತ. .  ಮತ್ತು ಮತ್ತೆ ಮೇಲೇರಿ. . ಬೀಳುವುದನ್ನು ಹೇಗೋ ತಪ್ಪಿಸಿ. . ಮತ್ತೆ ವಿಷಯದ ಕಡೆಗೆ concentration ತರಿಸಿ . . ಜೇಬಿಗೆ ಕೈ ಹಾಕಿ ಹತ್ತುಗಳ ನೋಟು ತೆಗೆದು ತೋರಿಸಿ. . 



"ಎನ್ನ ನೋಡು, 
. . . . ..            ಹಕ್ಕಿ ಉಂಡು . . 
.. . .. ... .....                        ಎನ್ನ ನೋಡು... 
ಯನ್ , ಏನ್ ಅಕ್ಕ, ಅಮ್ಮ ಇಲ್ಲೆ. . 
I no beg. . . "








No comments:

Post a Comment