ಅದ್ಯಾದೋ ಭೌತಶಾಸ್ತ್ರದ ಫಾರ್ಮುಲಾ. ಬಸ್ಸಿನ ವೇಗ ಹೆಚ್ಚಿದಂತೆಲ್ಲಾ ನಮ್ಮ ಕಣ್ಣಿಗೆ ಕಾಣುವ ಮಳೆಯು ಹೆಚ್ಚು ಹೆಚ್ಚು ಬಾಗಿದಂತೆ ಆಗುತ್ತದೆ೦ದು ಈಗ್ಗೆ 10 ವರ್ಷದ ಕೆಳಗೆ ನಮ್ಮ ತಿಪ್ಪೇಸ್ವಾಮಿಯ ಕ್ಲಾಸುಗಳಲ್ಲಿ ಕಲಿತದ್ದು. ಅದರೆ ಸರಿಯಾದ ಫಾರ್ಮುಲಾ ನೆನಪಿಗೆ ಬರುತ್ತಿಲ್ಲ. ಭೂಮಿಗೆ ಲಂಬವಾಗಿ ಬೀಳುತ್ತಿರುವ ಮಳೆಯು cosec ಥೀಟನಷ್ಟು ನೆಲಕ್ಕೆ ಬಾಗಿದಂತಾಗಬಹುದು ಎಂದು ನನ್ನ ಮನಸ್ಸು ಹೇಳುತ್ತಿದೆ. ಇಗ ಬಸ್ಸಿನ ಮುಂದೆ ಗಾಜಿನ ಮೇಲೆ ಒಂದೇ ಸಮನೆ ಬೀಳುತ್ತಿರುವ ಹನಿಗಳು ಬಿದ್ದ ಜಾಗದಲ್ಲೇ ದೊಡ್ಡ ದೊಡ್ಡ ವರ್ತುಳಗಳನ್ನು ಮಾಡುತ್ತಿದೆ. ಎದುರು ದಿಕ್ಕಿನಿಂದ ಬರುತ್ತಿರುವ ವಾಹನಗಳ head lightಗಳ ಬೆಳಕು ಆ ನೀರ ಬಿಂಬವನ್ನು ಹೊಳೆಯುವಂತೆ ಮಾಡ್ತಾ ಇವೆ. ಕಿಟಕಿ ಮುಚ್ಚಿದ್ದರೂ ಮುಂದೆ ಗಾಜಿನ ಮೇಲೆ ಬೀಳ್ತಿರೋ ಹನಿಗಳ ಗಾತ್ರದಿಂದಲೇ ತಿಳೀತಿದೆ ಮಳೆ ಜೋರಾಗಿದೆ. ಮಳೆ ಬರ್ತಿದ್ದರಿಂದ ಮುಂದಿನ ಸ್ಟಾಪ್ ಗಳಲ್ಲಿ ಯಾರು ಹತ್ತುತ್ತಿಲ್ಲ. ಅಧೃಷ್ಟಕ್ಕೆ ಎಂಬಂತೆ ಈ ಸಿವಿಲ್ ಬಸ್ಸಿನಲ್ಲಿ ಟಿವಿ ಹಾಕಿಲ್ಲ. ರೆಕಾರ್ಡು ಆಶಿಕಿ ಸಿನೆಮಾದ ಹಾಡುಗಳನ್ನು ಹೇಳ್ತಿದೆ.
ಮಧ್ಯಾನ್ನನೇ ಮೋಹನ ಕೇಳಿದ್ದ. ‘ಅವಳನ್ನು ಕರೀಲೇನೋ’ ಅಂತ. ಇಷ್ಟು ಬೇಗನೆ compromise ಬೇಡ ಅಂದುಕೊಂಡೆ. ಅವಳೇನೋ ನನ್ನ ಬಗ್ಗೆ, ಇಗ ಸೇರಿರುವ ಹೊಸ ಕೆಲಸದ ಬಗ್ಗೆ ಕೇಳಿದ್ದಳ೦ತೆ. ಅಷ್ಟು ಮಾತ್ರಕ್ಕೆ ಇಷ್ಟು ಬೇಗ ಹೊಂದಾಣಿಕೇನ. ಇಷ್ಟಕ್ಕೂ ಇದು ಮೋಹನನ crisis management technique ಇರಬಹುದು.
Whats about crisis management technique??
ReplyDelete